ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆಯು ಪಂಡಿತ್ ನೆಹರು ಅವರಿಂದಾಗಿ ಸೃಷ್ಟಿಯಾಗಿದೆ. ಇಲ್ಲದಿದ್ದರೆ, ಆ ಭಾಗವು ಕಾಶ್ಮೀರಕ್ಕೆ ಸೇರಿರುತ್ತಿತ್ತು.

Waves of Karnataka


 ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಸಮಸ್ಯೆಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕಾರಣ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಪ, ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ಭಾರಿ ಗದ್ದಲ ಸೃಷ್ಟಿಸಿತು. ಅಮಿತ್ ಶಾ ಅವರ ಹೇಳಿಕೆಯಿಂದ ಕೆರಳಿದ ವಿರೋಧ ಪಕ್ಷಗಳ ಕೆಲವು ಸಂಸದರು ಸಭಾತ್ಯಾಗ ಮಾಡಿದರು.

"ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆಯು ಪಂಡಿತ್ ನೆಹರು ಅವರಿಂದಾಗಿ ಸೃಷ್ಟಿಯಾಗಿದೆ. ಇಲ್ಲದಿದ್ದರೆ, ಆ ಭಾಗವು ಕಾಶ್ಮೀರಕ್ಕೆ ಸೇರಿರುತ್ತಿತ್ತು. ಪಿಒಕೆಗೆ ನೆಹರು ಹೊಣೆಗಾರ" ಎಂದು ಅಮಿತ್ ಶಾ ಆರೋಪಿಸಿದರು.
"ನೆಹರು ಅವರು ಅದು ತಮ್ಮ ತಪ್ಪು ಎಂದು ಹೇಳಿದ್ದರು. ಅದು ಕೇವಲ ಪ್ರಮಾದವಲ್ಲ. ಈ ದೇಶದ ಅಷ್ಟು ದೊಡ್ಡ ಭೂಮಿಯನ್ನು ಕಳೆದುಕೊಳ್ಳುವಂತಾದ ಬ್ಲಂಡರ್ (ಮಹಾ ಅಪರಾಧ)" ಎಂದು ಶಾ ಕಿಡಿಕಾರಿದರು.