ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗ ಹಾಗೂ ಉಗ್ರರ ವಿರುದ್ಧ ಸಹಾನುಭೂತಿಯಳ್ಳ ತನ್ವೀರ್ ಫೀರ್ ಎಂಬಾತನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ’

Waves of Karnataka


 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗ ಹಾಗೂ ಉಗ್ರರ ವಿರುದ್ಧ ಸಹಾನುಭೂತಿಯಳ್ಳ ತನ್ವೀರ್ ಫೀರ್ ಎಂಬಾತನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ಈ ಕುರಿತು ಬುಧವಾರ ತಮ್ಮ ಟ್ವೀಟ್‌ ಮಾಡಿರುವ ಶಾಸಕ ಯತ್ನಾಳ, ಸಿದ್ದರಾಮಯ್ಯ ಅವರ ಜೊತೆ ವೇದಿಕೆಯೊಂದರಲ್ಲಿ ತನ್ವೀರ್ ಫೀರ್ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ತನ್ವೀರ್ ಫೀರ್ ಮಧ್ಯಪ್ರಾಚ್ಯದಲ್ಲಿ ಉಗ್ರರೊಂದಿಗೆ ಸಂಬಂಧ ಇರುವವರ ಜೊತೆ ನಂಟು ಹೊಂದಿದ್ದಾರೆ ಎಂದು ಬಿಂಬಿಸುವ ಫೋಟೊಗಳನ್ನೂ ಯತ್ನಾಳ ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ತನ್ವೀರ್ ಜೊತೆ ಈ ಹಿಂದೆಯೂ ಅನೇಕ ಸಭೆ–ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ, ‘ಸಿದ್ದರಾಮಯ್ಯ ಅವರೇ ತನ್ವೀರ್ ಹಿನ್ನಲೆ ನಿಮಗೆ ಗೊತ್ತೇ?’ ಎಂದು ಪ್ರಶ್ನಿಸಿದ್ದಾರೆ.