ವಿಧಾನಸಭೆಯಲ್ಲಿರುವ ವೀರ ಸಾವರ್ಕರ್‌ ಫೋಟೋ ತೆಗೆಯುವ ಸಾಹಸಕ್ಕೆ ಕೈ ಹಾಕಬಾರದು.

Waves of Karnataka


 ವಿಧಾನಸಭೆಯಲ್ಲಿರುವ ವೀರ ಸಾವರ್ಕರ್‌ ಫೋಟೋ ತೆಗೆಯುವ ಸಾಹಸಕ್ಕೆ ಕೈ ಹಾಕಬಾರದು. ರಾಜ್ಯದ ಜನ ಸುಮ್ಮನಿರಲ್ಲ. ಅಂತಹ‌ ಸಾಹಸಕ್ಕೆ ಕೈ ಹಾಕಬಾರದು ಎಂದ ಸಿಎಂ ಹಾಗೂ ಆಡಳಿತ ‌ಪಕ್ಷಕ್ಕೆ ಸಲಹೆ ಕೊಡುತ್ತೇನೆ'' ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದರು.

''ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿ ಆಗಿ ಅಲ್ಪಸಂಖ್ಯಾತರಿಗೆ ಹಣ ಕೊಡಲು ನಮ್ಮ ಅಭ್ಯಂತರ ಇಲ್ಲ. 10 ಸಾವಿರ ಕೋಟಿ ಕೊಡ್ತೀನಿ‌ ಅಂತ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿರೋದು ಶೋಭೆ ತರಲ್ಲ. ಅವರ ಹೇಳಿಕೆಯಿಂದ ಹಿಂದುಗಳ ಆಕ್ರೋಶಕ್ಕೆ ಅವಕಾಶ ಆಗ್ತದೆ. ಈ‌ ರೀತಿ ಮಾತುಗಳನ್ನು ಸಿಎಂ ಅವರಿಂದ ನಿರೀಕ್ಷೆ ‌ಮಾಡಿರಲಿಲ್ಲ. ಈಗಾಗಲೇ ಅವರ ಹೇಳಿಕೆಯನ್ನು ಮಠಾಧೀಪತಿಗಳು ಸೇರಿ ಎಲ್ಲರೂ ಖಂಡಿಸಿದ್ದಾರೆ. ಏನಾದರೂ ಮಾತನಾಡಬೇಕಾದರೆ ಎಚ್ಚರಿಕೆ ವಹಿಸಿ ಮಾತನಾಡಬೇಕು ಎಂಬುದು ನನ್ನ ಸಲಹೆ'' ಎಂದರು.