ಯಶ್ ಪಾಲಿಗೆ ಡಿಸೆಂಬರ್ ಲಕ್ಕಿ ನಟ ಯಶ್ ಅವರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕು ಎರಡನ್ನೂ ಗಮನಿಸಿದರೆ, ಒಂದು ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ.

Waves of Karnataka


 ಕೆಜಿಎಫ್‌: ಚಾಪ್ಟರ್ 2' ಸಿನಿಮಾ ತೆರೆಕಂಡ ದಿನದಿಂದಲೂ 'ರಾಕಿಂಗ್ ಸ್ಟಾರ್' ಯಶ್ ಫ್ಯಾನ್ಸ್‌ಗೆ ಇದ್ದ ಒಂದೇ ಒಂದು ಮಿಲಿಯನ್ ಡಾಲರ್ ಪ್ರಶ್ನೆ ಎಂದರೆ, 'ಯಶ್ ಮುಂದಿನ ಸಿನಿಮಾ ಯಾವುದು' ಎನ್ನುವುದು. ಅದಕ್ಕೀಗ ಈ ವರ್ಷದ ಡಿಸೆಂಬರ್‌ನಲ್ಲೇ ಯಶ್ ಉತ್ತರ ನೀಡುತ್ತಿದ್ದಾರೆ. ಡಿ.8ರಂದು ಯಶ್ ಹೊಸ ಸಿನಿಮಾದ ಟೈಟಲ್ ಘೋಷಣೆ ಆಗಲಿದೆ. ಇನ್ನು, ಈ ಸಿನಿಮಾ ಡಿಸೆಂಬರ್‌ನಲ್ಲೇ ಘೋಷಣೆ ಆಗುತ್ತಿರುವುದಕ್ಕೆ ಹಲವು ಚರ್ಚೆಗಳು ಹುಟ್ಟಿಕೊಂಡಿವೆ.

ಯಶ್ ಪಾಲಿಗೆ ಡಿಸೆಂಬರ್ ಲಕ್ಕಿ
ನಟ ಯಶ್ ಅವರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕು ಎರಡನ್ನೂ ಗಮನಿಸಿದರೆ, ಒಂದು ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ. ಅದೇನೆಂದರೆ, ಅವರಿಗೆ ಸಂಬಂಧಿಸಿದ ಮಹತ್ವದ ಸಂಗತಿಗಳೆಲ್ಲ ನಡೆದಿರುವುದು ಡಿಸೆಂಬರ್ ತಿಂಗಳಿನಲ್ಲಿಯೇ. 'ಕೆಜಿಎಫ್‌' ಬಳಿಕ ಅವರ ಕ್ರೇಜ್ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಮುಂದಿನ ಸಿನಿಮಾದ ಮೇಲೂ ಅಪಾರವಾದ ನಿರೀಕ್ಷೆ ಇದೆ. ಇದೀಗ ಆ ಸಿನಿಮಾದ ಟೈಟಲ್ ಅನ್ನು ಕೂಡ ಯಶ್ ಡಿಸೆಂಬರ್ ತಿಂಗಳಿನಲ್ಲಿಯೇ ಘೋಷಣೆ ಮಾಡುತ್ತಿದ್ದಾರೆ