ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರರಲ್ಲಿ ಗೆಲುವು ಸಾಧಿಸಿರುವುದು ದೇಶದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ.

Waves of Karnataka


 ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರರಲ್ಲಿ ಗೆಲುವು ಸಾಧಿಸಿರುವುದು ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಇದು ಹೂಡಿಕೆದಾರರಲ್ಲೂ ಉತ್ಸಾಹ ಸೃಷ್ಟಿಸಿದ್ದು, ಇದರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಡಿಸೆಂಬರ್‌ 4ರಂದು ಸೋಮವಾರ ತೀವ್ರ ಏರಿಕೆ ಕಂಡಿವೆ. ಬಂಪರ್‌ ಲಾಭದೊಂದಿಗೆ ಸೋಮವಾರ ವಹಿವಾಟು ಮುಗಿಸಿದೆ.

ಸೆನ್ಸೆಕ್ಸ್ ಬರೋಬ್ಬರಿ 1,384 ಅಂಕ ಏರಿಕೆ ಕಂಡರೆ ಮತ್ತು ನಿಫ್ಟಿ 419 ಅಂಕಗಳ ಜಿಗಿತದೊಂದಿಗೆ ಹೊಸ ಐತಿಹಾಸಿಕ ಮಟ್ಟ ತಲುಪಿದೆ. ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳ ಷೇರುಗಳು ಭಾರೀ ಏರಿಕೆ ಕಂಡಿವೆ. ಒಂದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು 6 ಲಕ್ಷ ಕೋಟಿ ರೂ.ಗಳಷ್ಟು ವೃದ್ಧಿಯಾಗಿದೆ.

ಸೋಮವಾರದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 1,384 ಅಂಕಗಳ ಜಿಗಿತದೊಂದಿಗೆ 68,865 ಅಂಕಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ 419 ಅಂಕಗಳ ಜಿಗಿತದೊಂದಿಗೆ 20,686 ಅಂಕಗಳಲ್ಲಿ ವಹಿವಾಟು ಮುಗಿಸಿದೆ.