ಬಿಜೆಪಿ ಕಾರ್ಯಕರ್ತ ಹಾಗೂ ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಮೇಲಿನ ಹಲ್ಲೆಗೂ ನಮಗೂ ಸಂಬಂಧ ಇಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಮತ್ತು ವಿಧಾನಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದಾರೆ
December 04, 2023
ಬಿಜೆಪಿ ಕಾರ್ಯಕರ್ತ ಹಾಗೂ ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಬಳಿ ನನ್ನ ಸಹಚರರು ಹೋಗಿದ್ದು ನಿಜ ಹಾಗೂ ದಾಖಲೆಯನ್ನು ಕೇಳಿದ್ದು ನಿಜ. ಆದರೆ, ಹಲ್ಲೆಗೂ ನಮಗೂ ಸಂಬಂಧ ಇಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಮತ್ತು ವಿಧಾನಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ನಗರದ ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾರು ಹಲ್ಲೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ಆಗಲಿ. ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ. ಇದನ್ನು ನಾನು ನೇರವಾಗಿ ಹೇಳುತ್ತೇನೆ. ತನಿಖೆಯಿಂದ ಸತ್ಯ ಹೊರಬರಲಿ ಎಂದರು.
ನನ್ನ ಸಹಚರರು ಹೋಗಿದ್ದು ನಿಜ, ದಾಖಲೆಯೊಂದು ಕೇಳಿದ್ದು ನಿಜ. ದಾಖಲೆಯನ್ನು ಕೊಡುತ್ತೇನೆ ಎಂದು ಆತ ಕರೆದಿದ್ದೂ ನಿಜ. ನಮ್ಮವರನ್ನು ಕರೆದು ವಾಪಸ್ ಕಳಿಸಿದ ಮೇಲೆ ಸೀನ್ ಏಕೆ ಕ್ರಿಯೇಟ್ ಮಾಡಿದ್ದಾನೆ? ಎಂದು ಪ್ರಶ್ನಿಸಿದರು.
