ರಾಜಧಾನಿಯಲ್ಲಿ ನೀರಿನ ದರ ಏರಿಕೆ (Water Tariff Hike) ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕೂಡ ನೀರಿನ ದರ ಏರಿಕೆ ಬಗ್ಗೆ ಸುಳಿವು ನೀಡಿದ್ದಾರೆ. ನೀರಿನ ಬೆಲೆ ಏರಿಸಿದ್ದಾರೆ ಎಂದಿದ್ದಾರೆ. ಆದರೆ, ಇನ್ನೂ ಏರಿಸಿಲ್ಲ. ಆ ಬಗ್ಗೆ ಆಲೋಚನೆ ಇದೆ. ಬಹಳ ದಿನಗಳಿಂದ ನೀರಿನ ದರ ಏರಿಕೆ ಮಾಡಿಲ್ಲ ಎಂದು ಹೇಳುವ ಮೂಲಕ ದರ ಏರಿಕೆಯಾಗಲಿದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಬಸ್ ದರ ಏರಿಕೆ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿ, ನಿಗಮದಲ್ಲಿ ಕಷ್ಟದ ಪರಿಸ್ಥಿತಿ ಇದೆ. ಅದಕ್ಕೆ ಆ ರೀತಿ ಸಚಿವರು ಮಾತನಾಡಿರಬಹುದು ಅಂತ ಅಂದುಕೊಳ್ತೇನೆ. ನೋಡುತ್ತೇವೆ, ನಾವು ಇನ್ನು ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
