ನಿವೃತ್ತಿ ಘೋಷಣೆಯ ಮರುದಿನವೇ ಕ್ರಿಕೆಟ್ ಅಂಗಣಕ್ಕೆ ಮರಳುವ ನಿರ್ಧಾರ ಪ್ರಕಟಿಸಿದ ಶಿಖರ್‌ ಧವನ್‌

Waves of Karnataka


 ಭಾರತದ ಮಾಜಿ ಆರಂಭಿಕ ಬ್ಯಾಟರ್‌‌ ಶಿಖರ್ ಧವನ್ (Shikhar Dhawan) ಅಂತರರಾಷ್ಟ್ರೀಯ ಕ್ರಿಕೆಟ್‌‌ನಿಂದ ನಿವೃತ್ತಿ ಘೋಷಿಸಿದ ಮರು ದಿನವೇ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌‌ಸಿ) ಗೆ ಸೇರುವ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ಕೆಲವು ಮಾಜಿ ಸಹ ಆಟಗಾರರಂತೆಯೇ ಅವರು ನಿವೃತ್ತಿಯ ಬಳಿಕ ಲೀಗ್ ಲೀಗ್ ಕ್ರಿಕೆಟ್‌‌ನಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಹಿರಿಯ ವೃತ್ತಿಪರರು ಆಡುವ ಟಿ 20 ಪಂದ್ಯಾವಳಿ ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್‌. 38 ವರ್ಷದ ಮಾಜಿ ಆರಂಭಿಕ ಆಟಗಾರ ಧವನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತರಾದ ಎರಡು ದಿನಗಳ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.

ನಿವೃತ್ತಿಯ ಬಳಿಕ ನಿರಾಳವಾಗಿದ್ದೇನೆ. ಆದರೆ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ತಮ್ಮ ಕ್ರಿಕೆಟ್ ಸ್ನೇಹಿತರೊಂದಿಗೆ ಆಡಲು ಎದುರು ನೋಡುತ್ತಿದ್ದೇನೆ ಎಂದು ಶಿಖರ್ ಧವನ್ ತಿಳಿಸಿದ್ದಾರೆ. ನನ್ನ ದೇಹವು ಆಟದ ಬೇಡಿಕೆಗಳಿಗೆ ಇನ್ನೂ ಪೂರಕವಾಗಿದೆ. ಕ್ರಿಕೆಟ್ ಮತ್ತು ನಾನು ಬೇರ್ಪಡಿಸಲಾಗದ ಬಂಧವನ್ನು ಹೊಂದಿದ್ದೇನೆ. ಅದು ಎಂದಿಗೂ ನನ್ನಿಂದ ಹೊರಹೋಗುವುದಿಲ್ಲ ಎಂದು ಧವನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.