ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ರಾಜ್ಯದ ವಿಧಾನ ಪರಿಷತ್ ಸದಸ್ಯರು ಲಕ್ಷ ಲಕ್ಷ ಹಣ ಕ್ಲೇಮ್ ಮಾಡಿರುವುದು ಕಂಡುಬಂದಿದೆ. ಕೇವಲ ಒಂದು ವರ್ಷದಲ್ಲಿ ಲಕ್ಷಾಂತರ ರೂ.ಗಳನ್ನು ಸರ್ಕಾರದಿಂದ ಎಂಎಲ್‌ಸಿಗಳು ಪಡೆದಿರುವ ಮಾಹಿತಿ ಬಹಿರಂಗವಾಗಿದೆ. ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ಅವರು ಮಾಹಿತಿ ಹಕ್ಕು ಕಾಯ್ದೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎಂಎಲ್‌ಸಿಗಳು ಆರೋಗ್ಯಕ್ಕಾಗಿ (MLCs Health Expenditure) ಪಡೆದಿರುವ ಹಣದ ಕುರಿತ ಮಾಹಿತಿಯನ್ನು ಸಚಿವಾಲಯವು ನೀಡಿದೆ.
ಆರೋಗ್ಯಕ್ಕಾಗಿ ಸರ್ಕಾರದಿಂದ ಹಣ ಕ್ಲೇಮ್ ಮಾಡಲು ಎಂಎಲ್‌ಸಿಗಳಿಗೆ ಅವಕಾಶವಿದೆ. ಹೀಗಾಗಿ 2023ರ ಮೇ 1 ರಿಂದ 2024ರ ಜುಲೈ ತಿಂಗಳವರೆಗೆ ಯಾರು ಎಷ್ಟು ಹಣ ಪಡೆದಿದ್ದಾರೆ ಎಂಬ ಮಾಹಿತಿಯನ್ನು ವಿಧಾನ ಪರಿಷತ್ ಸಚಿವಾಲಯ ಮಾಹಿತಿ ನೀಡಿದೆ.
