ಇಂಡಿಯಾ ಮೈತ್ರಿಕೂಟ ಮತ ಬ್ಯಾಂಕ್‌ಗಾಗಿ ಅಶ್ಲೀಲ ಡ್ಯಾನ್ಸ್ ಮಾಡುತ್ತಿದೆ: ಮೋದಿ
May 25, 2024
ಇಂಡಿಯಾ ಮೈತ್ರಿಕೂಟ (INDIA bloc) ತನ್ನ ಮತ ಬ್ಯಾಂಕ್‌ಗಾಗಿ ʼಮುಜ್ರಾʼ (ಒಂದು ಪ್ರಕಾರದ ನೃತ್ಯ) ಮಾಡುತ್ತಿದೆ ಎಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಟೀಕಿಸಿದ್ದಾರೆ.
ಬಿಹಾರದ (Bihar) ಪಾಟಲೀಪುತ್ರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂಡಿಯಾ ಮೈತ್ರಿಕೂಟ ತನ್ನ ಮತ ಬ್ಯಾಂಕ್‌ನ ಗುಲಾಮಗಿರಿಯನ್ನು ಸ್ವೀಕರಿಸಲು ಬಯಸುತ್ತದೆ. ಆದರೆ ನಮಗೆ ಸಂವಿಧಾನವು ಸರ್ವೋಚ್ಚವಾಗಿದೆ ಎಂದು ಹೇಳಿದರು. ಯಾವುದೇ ಸಂದರ್ಭದಲ್ಲಿಯೂ ಭಾರತದ ಸಂವಿಧಾನ ಎಸ್‌ಸಿ/ಎಸ್ ಟಿ, ಒಬಿಸಿಗಳಿಗೆ ನೀಡಿರುವ ಮೀಸಲಾತಿ ಪ್ರಯೋಜನಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮುಜ್ರಾ ಎಂದರೆ ಮೊಗಲ್ ಆಡಳಿತದ ಕಾಲದಲ್ಲಿ ಬಂದ ನೃತ್ಯ ಪ್ರಕಾರ. ಇದನ್ನು ಮೊದಲು ಹೆಚ್ಚಾಗಿ ರಾಜರು ಮತ್ತು ಗಣ್ಯರ ಆಸ್ಥಾನಗಳಲ್ಲಿ ವೇಶ್ಯೆಯರು ಪ್ರದರ್ಶಿಸುತ್ತಿದ್ದರು. ಹಿಂದಿ ಸಿನಿಮಾಗಳಲ್ಲಿ ಇದು ವ್ಯಾಪಕವಾಗಿದೆ.
Tags
