400 ಸೀಟು, 400 ಸೀಟು ಎಂದು ಪ್ರತಿಪಕ್ಷಗಳನ್ನು ಮಂಗ್ಯಾ ಮಾಡಿದ ಮೋದಿ

Waves of Karnataka


 ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಹುತೇಕ ಸಂದರ್ಭದಲ್ಲಿ ಗಂಭೀರವಾಗಿರುತ್ತಾರೆ. ಚುನಾವಣೆ ಭಾಷಣಗಳು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವಾಗಂತಲೂ ತೀಕ್ಷ್ಣವಾಗಿ ಮಾತನಾಡುತ್ತಾರೆ. ಟೀಕೆ, ಆರೋಪ, ಆಕ್ರೋಶ ಹೊರಹಾಕುತ್ತಾರೆ. ಹಾಗೆಯೇ, ಪ್ರತಿಪಕ್ಷಗಳನ್ನು ಅವರು ವ್ಯಂಗ್ಯ ಮಾಡುತ್ತಾರೆ. ಹಾಸ್ಯ ಚಟಾಕಿ ಮೂಲಕವೂ ಟಾಂಗ್‌ ಕೊಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ 400 ಸೀಟು ಗೆಲ್ಲುತ್ತದೆ ಎಂಬುದನ್ನು ಪದೇಪದೆ ಹೇಳಿ ಪ್ರತಿಪಕ್ಷಗಳು ಕೂಡ ತಮ್ಮ ಪರವಾಗಿ ಪ್ರಚಾರಕ್ಕೆ ಹೇಗೆ ಬಳಸಿಕೊಂಡರು ಎಂಬುದನ್ನು ಖುದ್ದು ನರೇಂದ್ರ ಮೋದಿ ಅವರೇ ಹೇಳಿದ್ದಾರೆ.ಟಿವಿ ಚಾನೆಲ್‌ಗೆ ಸಂದರ್ಶನ ನೀಡುವ ವೇಳೆ ಚಾರ್‌ ಸೌ ಪಾರ್‌ ಅಭಿಯಾನದ ಕುರಿತು ತಮಾಷೆಯಾಗಿ ಮಾತನಾಡಿದ್ದಾರೆ. “ನಾವು 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದೆವು. ಆದರೆ, ಪ್ರತಿಪಕ್ಷಗಳು ಪದೇಪದೆ ಹೇಳಿದವು. ಎನ್‌ಡಿಎ 400 ಸೀಟು ಗೆಲ್ಲುವುದೇ ಇಲ್ಲ ಎಂದು ಹೇಳಿದವು. ಆದರೆ, ಕೊನೆಗೆ ಏನಾಯಿತು? ಪ್ರತಿಪಕ್ಷಗಳೇ 400 ಸೀಟು ಗೆಲ್ಲಲ್ಲ ಗೆಲ್ಲಲ್ಲ ಎಂದು ಅಭಿಯಾನ ಮಾಡಿದವು. ನಾನು ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂಬುದು ಪ್ರತಿಪಕ್ಷಗಳ ನಾಯಕರಿಗೆ ಗೊತ್ತೇ ಆಗಲಿಲ್ಲ. 3 ಹಂತಗಳ ಮತದಾನ ಮುಗಿದ ಬಳಿಕ, ನೀವೇಕೆ 400 ಸೀಟು ಗೆಲ್ಲುತ್ತಾರೋ, ಇಲ್ಲವೋ ಎಂಬುದರ ಕುರಿತು ಚುನಾವಣೆ ಪ್ರಚಾರ ಮಾಡುತ್ತಿದ್ದೀರಿ ಎಂಬುದಾಗಿ ಬೇರೆ ಯಾರೋ ಪಕ್ಷಗಳಿಗೆ ಹೇಳಿದರು” ಎಂದು ನಗುತ್ತಲೇ ಪ್ರತಿಪಕ್ಷಗಳನ್ನು ಯಾಮಾರಿಸಿದ ರೀತಿಯನ್ನು ಮೋದಿ ವಿವರಿಸಿದರು.