ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕಾಟೇರ' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
December 14, 2023
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕಾಟೇರ' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ಸಿನಿಮಾ ಬಗ್ಗೆ ಸಕತ್ ಹೈಪ್ ಕ್ರಿಯೆಟ್ ಆಗಿದ್ದು, ದಾಸನ ಅಭಿಮಾನಿಗಳು 'ಕಾಟೇರ'ನ ಆಗಮನಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.
ಇದರ ಬೆನ್ನಲ್ಲೇ ಚಿತ್ರತಂಡ ಅಭಿಮಾನಿಗಳಿಗೆ ಸಕತ್ ಸಿಹಿ ಸುದ್ದಿ ನೀಡಿದ್ದು, ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಡಿಸೆಂಬರ್ 13 ರಂದು 'ಕಾಟೇರ' ಬಗ್ಗೆ ಅಪ್‌ಡೇಟ್ ಹಂಚಿಕೊಳ್ಳುವುದಾಗಿ ನಿರ್ದೇಶಕ ತರುಣ್ ಸುಧೀರ್ ಮಾಹಿತಿ ನೀಡಿದ್ದರು. ಇದು ಹಲವು ಗೊಂದಲಕ್ಕೆ ಕಾರಣವಾಗಿತ್ತು. ಡಿಸೆಂಬರ್ 16 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಚಿತ್ರತಂಡ ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, ಸಾಕಷ್ಟು ಮೆಚ್ಚುಗೆ ಪಡೆದಿದೆ. ಕಾಟೇರ ಸಿನಿಮಾದ ಎರಡು ಹಾಡು ರಿಲೀಸ್ ಆಗಿವೆ. ಎರಡೂ ಹಾಡಲ್ಲಿ ಆರಾಧನಾ ಹಾಗೂ ದರ್ಶನ್ ಪ್ರೀತಿಯ ಕಥೆಯ ಚಿತ್ರಣ ಇದೆ. ಆದರೆ ಸಿನಿಮಾದ ಮೊದಲ ಮೇಕಿಂಗ್ ವಿಡಿಯೋ ಮಾತ್ರ ಸಾಕಷ್ಟು ವಿಷಯದ ಮೇಲೆ ಬೆಳಕು ಚೆಲ್ಲಿದೆ. ಚಿತ್ರದ ಪ್ರತಿ ವಿಷಯದ ಝಲಕ್ ಅನ್ನ ಇಲ್ಲಿ ಕೊಟ್ಟಿದೆ ಅಂತಲೇ ಹೇಳಬಹುದು
Tags
