ಅಯೋಧ್ಯೆಯ ರಾಮಮಂದಿರ ದೇಗುಲದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಲಾಗಿದೆ. ಆಹ್ವಾನ ಸ್ವೀಕರಿಸಿದ ನನಗೆ ತುಂಬಾ ಸಂತೋಷ ಆಗಿದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
December 18, 2023
ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಆಹ್ವಾನಿಸಲಾಗಿದೆ. ರಾಮ ದೇಗುಲ ಅಭಿವೃದ್ಧಿ ಕಮಿಟಿಯ ಅಧ್ಯಕ್ಷ ಎನ್.ಮಿಶ್ರಾ, ಆರ್.ಎಸ್.ಎಸ್ ಹಿರಿಯ ನಾಯಕರಾದ ರಾಮ್ ಲಾಲ್ ಹಾಗೂ ವಿಹೆಚ್ ಪಿಯ ಹಿರಿಯ ನಾಯಕರಾದ ಅಲೋಕ್ ಕುಮಾರ್ ದೆಹಲಿಯ ಹೆಚ್ಡಿಡಿ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಈ ವಿಚಾರವನ್ನು ಟ್ವೀಟ್ ಮೂಲಕ ದೇವೇಗೌಡರು ಹಂಚಿಕೊಂಡಿದ್ದಾರೆ.
ಅಯೋಧ್ಯೆಯ ರಾಮಮಂದಿರ ದೇಗುಲದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಲಾಗಿದೆ. ಆಹ್ವಾನ ಸ್ವೀಕರಿಸಿದ ನನಗೆ ತುಂಬಾ ಸಂತೋಷ ಆಗಿದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅತ್ಯಂತ ಜಾತ್ಯತೀತ ನಾಯಕ ಎಂದು ಪರಿಗಣಿಸಲ್ಪಟ್ಟ ದೇವೇಗೌಡರು ಈಗ ಕೇಸರಿ ಪಾಳೆಯದ ಮಿತ್ರರಾಗಿ ರೂಪಾಂತರಗೊಂಡಿದ್ದಾರೆ. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಲು ಇಚ್ಛಿಸುತ್ತೇನೆ ಎಂದು ಹೇಳುತ್ತಿದ್ದ ಗೌಡರು ಈಗ ಅಂತಹ ಆಲೋಚನೆಗಳನ್ನು ತಮ್ಮೊಳಗೆ ಅದುಮಿ ಇಟ್ಟುಕೊಳ್ಳಬೇಕಾಗಬಹುದು.
Tags
