ಬಾಲಿವುಡ್ 'ಬಾಯ್ಜಾನ್' ಸಿನಿಮಾಗೆ ಚೀನಾ ಕಿರಿಕ್: 'ಬ್ಯಾಟಲ್ ಆಫ್ ಗಲ್ವಾನ್' ಸುತ್ತ ವಿವಾದದ ಸುಳಿ

Waves of Karnataka


 ಇತ್ತೀಚೆಗೆ ಬಿಡುಗಡೆಯಾದ ನಟ ಸಲ್ಮಾನ್ ಖಾನ್ ಅಭಿನಯದ ಯುದ್ಧದ ಚಿತ್ರ 'Battle of Galwan'ಟೀಸರ್ ಚೀನಾದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ವಾಸ್ತವ ಸತ್ಯಗಳನ್ನು ತಿರುಚಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ಹೇಳುತ್ತಿವೆ.

2020 ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್‌ನಲ್ಲಿ ನಡೆದಿದ್ದ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಈ ಚಿತ್ರ ಆಧರಿಸಿದ್ದು, ಅಪೂರ್ವ ಲಖಿಯಾ ನಿರ್ದೇಶಿಸಿದ್ದಾರೆ. ಝೈನ್ ಶಾ, ಅಂಕುರ್ ಭಾಟಿಯಾ ಮತ್ತು ವಿಪಿನ್ ಭಾರದ್ವಾಜ್ ಜೊತೆಗೆ ಚಿತ್ರಾಂಗದಾ ಸಿಂಗ್ ಮಹಿಳಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸಲ್ಮಾನ್ ಖಾನ್ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಪಡೆಗಳ ಒಳನುಗ್ಗುವ ಹೋರಾಟದಲ್ಲಿ ಮಡಿದ 16 ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಪಾತ್ರದಲ್ಲಿ ನಟಿಸಿದ್ದಾರೆ.

ಚೀನಾ ಮಾಧ್ಯಮಗಳು ಹೇಳೋದು ಏನು? ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್‌ನಲ್ಲಿನ ಲೇಖನವೊಂದರಲ್ಲಿ ಜೂನ್ 2020 ರ ಘರ್ಷಣೆಯ ಘಟನೆಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ವಾಸ್ತವ ಸತ್ಯಗಳು ಹೊಂದಿಕೆಯಾಗುವುದಿಲ್ಲ ಎಂದು ಆರೋಪಿಸಿದೆ. 'ಸೋ ಕಾಲ್ಡ್ ತಜ್ಞರು' ಎಂದು ಉಲ್ಲೇಖಿಸಿದ್ದು, 'Battle of Galwan'ಒಂದು ಟಾಪ್ ಸಿನಿಮಾ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ಸಂತೋಷ್ ಬಾಬು ಪಾತ್ರವನ್ನು 'ಸೋ ಕಾಲ್ಡ್ ಪ್ರಮುಖ ಪಾತ್ರ' ಎಂದು ಹೇಳಿ ಧೈರ್ಯಶಾಲಿ, ತ್ಯಾಗಿ ಎಂಬುದನ್ನು ನಿರಾಕರಿಸಿವೆ.