ಅನಧಿಕೃತ ಮನೆಗಳ ತೆರವು: ಕೋಗಿಲು ಲೇಔಟ್ಗೆ ಡಿ.ಕೆ ಶಿವಕುಮಾರ್ ಭೇಟಿ

Waves of Karnataka


 ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ನಡೆಯುತ್ತಿರುವ ಕೋಗಿಲು ಫಕೀರ್ ಲೇಔಟ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೋಮವಾರ ಭೇಟಿ ನೀಡಿದ್ದು, "ಭೂ ಕಳ್ಳರ" ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇಂದು ಯಲಹಂಕ ಬಳಿಯ ಕೋಗಿಲು ಲೇಔಟ್ ನಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಸರ್ಕಾರ 9-10 ವರ್ಷಗಳಿಂದ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದು, ಇಲ್ಲಿ ಕಸದ ಗುಂಡಿ ಇತ್ತು. ಆದರೆ ಅದರ ಮೇಲೆಯೇ ಕೆಲವರು ರಾತ್ರೋರಾತ್ರಿ ಬಂದು ಶೆಡ್ ನಿರ್ಮಿಸಿದ್ದಾರೆ ಎಂದರು.

ಯಾರೂ ಸಹ ಸರ್ಕಾರಿ ಭೂಮಿಗೆ ಮತದಾರರ ಚೀಟಿ ನೀಡಿಲ್ಲ. ಸ್ಥಳೀಯ ಶಾಸಕರು ಅದನ್ನು ತಮ್ಮ ಗಮನಕ್ಕೂ ತಂದಿದ್ದಾರೆ ಎಂದರು.