ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ, ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸ್ವಾಮೀಜಿಗಳ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾನು ಎರಡು ಬಾರಿ ಸಿಎಂ ಆದೆ. ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ. ಒಕ್ಕಲಿಗ ಸಮಾಜ, ಇನ್ನೊಂದು ಸಮಾಜದ ಬಗ್ಗೆ ಹೇಳಲ್ಲ. ನಾನು ಹೇಳೋದು ಸಮಾಜದಲ್ಲಿ ಈ ರೀತಿ ಜಾತಿ ವಿಚಾರ ಹೇಳಿಕೊಂಡು, ಧಾರ್ಮಿಕ ಕ್ಷೇತ್ರಗಳನ್ನು ದುರುಪಯೋಗ ಮಾಡಿಕೊಳ್ಳುವುದು ಯಾವುದೇ ರಾಜಕಾರಣಿಗಳಿಗೆ ಶೋಭೆ ತರಲ್ಲ ಎಂದರು.
ಸ್ವಾಮೀಜಿಗಳು ಸೇರಿ ಎಲ್ಲರಿಗೂ ಹೇಳುತ್ತೇನೆ. ಇಲ್ಲಿ ಪ್ರಶ್ನೆ ರಾಜ್ಯ ನೆಮ್ಮದಿಯಿಂದ ಇರಬೇಕು. ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ, ಈಗ ಬೃಹದಾಕಾರದ ಜಾತಿ ರಾಜಕಾರಣ ಮಾಡಲಾಗುತ್ತಿದೆ. ಇದರಿಂದ ನಷ್ಟ ಅವ್ರಿಗೆ ಅಲ್ಲ. ರಾಜ್ಯಕ್ಕೆ ನಷ್ಟ ಆಗುತ್ತದೆ. ರಾಜ್ಯದಲ್ಲಿ ಸಮಾಜಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಅಲ್ಲ. ಕರ್ನಾಟಕದ ಜನತೆಗೆ ಮುಜುಗರ" ಎಂದು ವಾಗ್ದಾಳಿ ನಡೆಸಿದರು.
