ಕರ್ನಾಟಕ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಬಿಕ್ಕಟ್ಟು ಸರ್ಕಾರದ ಆಡಳಿತ ಯಂತ್ರವನ್ನು ದುರ್ಬಲಗೊಳಿಸುತ್ತಿದೆ. ಮೇ 2023 ರಿಂದ ಪಕ್ಷದ ಉನ್ನತ ನಾಯಕತ್ವವು ನೋಡುತ್ತಲೇ ಇದೆ. ಆದರೆ ಸಿಎಂ ಹುದ್ದೆ ಭಿನ್ನಮತವನ್ನು ಶಮನಗೊಳಿಸಿ ಆಡಳಿತದತ್ತ ಗಮನಹರಿಸುವ ಕೆಲಸವನ್ನು ಹೈಕಮಾಂಡ್ ಇದುವರೆಗೆ ಮಾಡಿಲ್ಲ.
ಈಗ, ಆಂತರಿಕ ಕಚ್ಚಾಟದ ಈ ರಾಜಕೀಯ ನಾಟಕಕ್ಕೆ ತೆರೆ ಎಳೆಯಲು ಎಐಸಿಸಿ ಅಧ್ಯಕ್ಷರು ಬಂದು ರಾಜ್ಯ ನಾಯಕರ ಕೋಪವನ್ನು ತಣ್ಣಗಾಗಿಸಲು ಹೆಜ್ಜೆ ಹಾಕಿದ್ದಾರೆ. ಆದರೆ ಬಿಕ್ಕಟ್ಟನ್ನು ನಿಭಾಯಿಸಲು ಮಾರ್ಗ ಅಷ್ಟು ಸುಲಭವಾಗಿರುವಂತೆ ಕಾಣುತ್ತಿಲ್ಲ.
ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಐದು ವರ್ಷಗಳ ಅವಧಿಯ ಅರ್ಧದಾರಿಯನ್ನು ದಾಟಿದ ನಂತರ ಸಿಎಂ ಹುದ್ದೆ ಕಚ್ಚಾಟ ತೀವ್ರಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಯಾ ಬಣಗಳು ಪರಸ್ಪರರನ್ನು ಮೀರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವಂತೆ ತೋರುತ್ತಿದೆ. ಇದು ಪಕ್ಷದ ಹೈಕಮಾಂಡ್ ನ್ನು ಇಕ್ಕಟ್ಟಿಗೆ ಸಿಲುಕಿಸಿದೆ
