ಬೆಂಗಳೂರಿನ ಉಬರ್ ಆಟೋ ಚಾಲಕ ತನ್ನ ಆಟೋ ಹತ್ತಿದ ಈಶಾನ್ಯ ಭಾರತದ ಮಹಿಳೆಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ

Waves of Karnataka

 

ಬೆಂಗಳೂರಿನ ಉಬರ್ ಆಟೋ ಚಾಲಕ ತನ್ನ ಆಟೋ ಹತ್ತಿದ ಈಶಾನ್ಯ ಭಾರತದ ಮಹಿಳೆಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಮಹಿಳೆ

ಆಟೋ ಚಾಲಕನೊಬ್ಬ ತನಗೆ ಅರ್ಥವಾಗದ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ. ಅಲ್ಲದೆ ಆಕೆಯನ್ನು ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಬೆಂಗಳೂರು ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.

ಮಹಿಳೆಯ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ಹೆಚ್ಚಿನ ವಿವರಗಳನ್ನು ನೀಡುವಂತೆ ಮಹಿಳೆಗೆ ಕೇಳಿದ್ದಾರೆ. ಘಟನೆಯ ಸ್ಥಳ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಕೋರಿದ್ದಾರೆ.


ಅಂತೆಯೇ ಉಬರ್ ಸಂಸ್ಥೆ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಕ್ಷಮೆಯಾಚಿಸಿದೆ. "ಈ ನಡವಳಿಕೆಯು ಅತ್ಯಂತ ಕಳವಳಕಾರಿಯಾಗಿದೆ ಮತ್ತು ಇದು ಸಂಭವಿಸಿದ್ದಕ್ಕೆ ನಮಗೆ ತುಂಬಾ ವಿಷಾದವಿದೆ" ಎಂದು ಅದು ಹೇಳಿದೆ.