ಇನ್ಮೇಲೆ ಸಿಗುತ್ತೆ 5KG ಅಕ್ಕಿ ಬದಲು, ಇಂದಿರಾ ಆಹಾರ ಕಿಟ್‌

Waves of Karnataka


 ಕರ್ನಾಟಕ ಸರ್ಕಾರದ (Karnataka Congress Government) ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ಪ್ರತಿ ಪಡಿತರ ಚೀಟಿದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು 'ಇಂದಿರಾ ಆಹಾರ ಕಿಟ್' ವಿತರಣೆಗೆ (Indira Food Kit) ಅನುಮೋದನೆ ನೀಡಲಾಗಿದೆ. ಈ ನಿರ್ಣಯವು ಬಿಪಿಎಲ್ ಕುಟುಂಬಗಳ (BPL Card) ಪೌಷ್ಟಿಕ ಆಹಾರವನ್ನು ಖಚಿತಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ (Minister KH Muniyappa) ಪ್ರಸ್ತಾವನೆಯನ್ನು ಸಂಪುಟವು ಒಪ್ಪಿಕೊಂಡಿದೆ.