ಚಿನ್ನ ಎಂದರೆ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ ಹೇಳಿ ಎಲ್ಲರಿಗೂ ಚಿನ್ನ ಅಚ್ಚು-ಮೆಚ್ಚು, ಅದರಲ್ಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಹೆಚ್ಚಿನ ಒಲವು ಇದೆ. ಅನೇಕ ಮಹಿಳೆಯರು ಆಭರಣಗಳನ್ನು ಧರಿಸುವುದಕ್ಕಿಂತ ಕಷ್ಟದ ಸಮಯದಲ್ಲಿ ಆಗುತ್ತೆ ಎಂಬ ಕಾರಣಕ್ಕಾಗಿ ಅತಿ ಹೆಚ್ಚು ಚಿನ್ನ ಖರೀದಿ ಮಾಡುತ್ತಾರೆ.
ಭಾರತ ಅಕ್ಷರಶಃ ಚಿನ್ನದ ನಾಡೆಂದು ಮತ್ತೊಮ್ಮೆ ಸಾಬೀತು ಮಾಡಿದೆ. ಇದರಲ್ಲಿ ಭಾರತೀಯ ಮಹಿಳೆಯರು ಗೋಲ್ಡನ್ ಸ್ಟಾರ್ಸ್ ಎಂಬುವುದನ್ನು ಖಾತರಿಯಾಗಿದೆ. ಏಕೆಂದರೆ, ಭಾರತದ ಮಹಿಳೆಯರ ಬಳಿ ಇರುವುದು ಅಷ್ಟಿಷ್ಟಲ್ಲ ಬರೋಬ್ಬರಿ 24,000 ಟನ್ ಬಂಗಾರವಿದೆ.ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ಹೇಳಿದೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ವಿಶ್ವದ ವಿವಿಧ ದೇಶಗಳ ಚಿನ್ನದ ದಾಸ್ತಾನು ಕುರಿತಾದ ಅಂಕಿ-ಅಂಶಗಳಲ್ಲಿ ಈ ಮಾಹಿತಿ ಬಹಿರಂಗಪಡಿಸಿದೆ. ಅಮೆರಿಕ ಸೇರಿದಂತೆ ವಿಶ್ವದ ಅಗ್ರ 5 ದೇಶಗಳಲ್ಲಿರುವ ಒಟ್ಟು ಚಿನ್ನಕ್ಕಿಂತಲೂ ಭಾರತದ ಮಹಿಳೆಯರ ಬಳಿಯೇ ಹೆಚ್ಚು ಚಿನ್ನವಿದೆ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ 8,000 ಟನ್ ಚಿನ್ನವಿದೆ. ಇನ್ನೂ ಜರ್ಮನಿಯಲ್ಲಿ 3,300 ಟನ್ ಗೋಲ್ಡ್ ಇದೆ. ಇಟಲಿಯಲ್ಲಿ 2,450 ಟನ್ ಬಂಗಾರ ಇದ್ದರೆ, ಫ್ರಾನ್ಸ್‌ನಲ್ಲಿ 2,400 ಟನ್ ಬಂಗಾರ ಇದೆ. ರಷ್ಯಾದಲ್ಲಿ 1900 ಟನ್ ಚಿನ್ನ ಇದೆ. ಈ ಐದು ದೇಶಗಳಲ್ಲಿರುವ ಚಿನ್ನವನ್ನು ಸೇರಿಸಿದರೆ, 18,050 ಟನ್ ಬಂಗಾರ ಆಗಲಿದೆ. ಆದರೆ, ಭಾರತದ ಮಹಿಳೆಯರ ಬಳಿ 24,000 ಟನ್ ಚಿನ್ನ ಇದೆ.
