ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಅಡಿಯಲ್ಲಿ ಪ್ಯಾಕೇಜ್ ಘೋಷಣೆ ಇದಕ್ಕೆ ಬಿಜೆಪಿಯ ವಿರೋಧಕ್ಕೆ ಕಾರಣವೇನು?
January 09, 2025
ನಕ್ಸಲರ ಶಣಾಗತಿಗೆ ಪ್ಯಾಕೇಜ್ ನೀಡುತ್ತಿರುವುದನ್ನು ಬಿಜೆಪಿ ವಿರೋಧ ಮಾಡಿದೆ. ಮೃತ ಪೊಲೀಸರ, ಜನಸಾಮಾನ್ಯರ ಜೀವನದ ಕುರಿತು ಸರಕಾರ ಯೋಚಿಸಿದೆಯೇ? ಹೀಗಿರುವಾಗ ನಕ್ಸಲರಿಗೆ ಪ್ಯಾಕೇಜ್ ಕೊಡುವುದು ಎಷ್ಟು ಸಮಂಜಸ? ಎಂದು ಬಿಜೆಪಿ ನಾಯಕರ ಎನ್ ರವಿ ಕುಮಾರ್ ಪ್ರಶ್ನಿಸಿದ್ದಾರೆ. ಜೀವನಕ್ಕೆ ಆಧಾರ ಆಗಬೇಕೆಂಬ ವಿಷಯ ಇದ್ದರೂ ಅದು ಸರಿಯೇ? ಇದುವರೆಗೆ ಆಗಿರುವ ಎಲ್ಲ ಪ್ರಕರಣಗಳನ್ನೂ ರದ್ದು ಮಾಡುವಿರಾ? ಕೆಲವರ ಮೇಲೆ 15 ಕೇಸಿದ್ದರೆ, ಇನ್ನೂ ಹಲವರ ಮೇಲೆ 10, 5 ಕೇಸುಗಳಿವೆ. ಅನೇಕರು ಪೊಲೀಸರನ್ನು ಹತ್ಯೆ ಮಾಡಿದ್ದರೆ, ಇನ್ನೂ ಹಲವರು ಜನರನ್ನೇ ಕೊಂದಿದ್ದಾರೆ. ಲೂಟಿ ಪ್ರಕರಣಗಳೂ ಇವೆ ಎಂದು ಅವರು ಗಮನ ಸೆಳೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Tags
