ಮುಡಾ ಹಗರಣದ ಕುರಿತು ಮಾತನಾಡಿದ ಪ್ರತಾಪ್ ಸಿಂಹ, ಮುಡಾ ಇರುವವರೆಗೂ ಸಿಎಂ ಸಿದ್ದರಾಮಯ್ಯ ಮಾಡಿರುವ ಕೆಲಸ ಸ್ಥಿರ ಸ್ಥಾಯಿಯಾಗಿರುತ್ತದೆ, ಹೀಗಾಗಿ ಅವರ ಹೆಸರನ್ನು ಬೇರೆ ಎಲ್ಲೂ ಇಡುವ ಅವಶ್ಯಕತೆ ಇಲ್ಲ ಎಂದು "ರಸ್ತೆಗೆ ನಾಮಕರಣ" ವಿಚಾರವಾಗಿ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಮಾತು ಮುಂದುವರಿಸಿ "ನಿಮ್ಮ ಹೆಸರಿನಲ್ಲೇ ಮೈಸೂರಿನಲ್ಲಿ ವೃತ್ತ ಇದೆ. ಹಾಸ್ಟೆಲ್ ಒಂದಕ್ಕೆ ನಿಮ್ಮ ಹೆಸರನ್ನು ಇಡಲಾಗಿದೆ. ಈಗಾಗಲೇ ಹೆಸರಿರುವ ರಸ್ತೆಗೆ ನಿಮ್ಮ ಹೆಸರಿಡುವ ಅವಶ್ಯಕತೆ ಇಲ್ಲ. ಈ ವಿಚಾರವಾಗಿ ನಮಗೆ ಸಿಎಂ ಮನೆ ಬಾಗಿಲು ತಟ್ಟುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಕಾನೂನು ಪದವೀಧರರು, ಅವರಿಗೆ ಕಾನೂನಿನ ಅರಿವು ಇರಬೇಕು. ಮೈಸೂರಿನ ಹಿನ್ನೆಲೆಯೂ ಸಿದ್ದರಾಮಯ್ಯನವರಿಗೆ ಗೊತ್ತಿದೆ. ಮಹಾರಾಜರ ಋಣದಲ್ಲಿ ನಾವೆಲ್ಲಾ ಇದ್ದೇವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ವಿವಿಯಲ್ಲೇ ಸಿದ್ದರಾಮಯ್ಯ ಪದವಿ ಪಡೆದಿದ್ದು. ಅವರು ಕಟ್ಟಿಸಿದ ಡ್ಯಾಂ ನೀರನ್ನೇ ಸಿದ್ದರಾಮಯ್ಯ ಕುಡಿಯುತ್ತಿರುವುದು. ಅನ್ನ, ವಿದ್ಯೆ, ಕುಡಿಯುವ ನೀರಿನ ಋಣ ನಮ್ಮೆಲ್ಲರ ಮೇಲಿದೆ. ಪ್ರಜ್ಞಾವಂತರಾದವರು ಈ ವಿಚಾರದಲ್ಲಿ ವೈರತ್ವ, ದ್ವೇಷ ಮಾಡಬಾರದು ಎಂದು ಕುಟುಕಿದ್ದಾರೆ
