ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆ ಪ್ರಕಾರ Aliens ಅನ್ಯಗ್ರಹವಲ್ಲ ಭೂಮಿಯ ರಹಸ್ಯ ಜೀವಿಗಳು

Waves of Karnataka


 ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಂನ ಹೊಸ ಪ್ರಬಂಧವು “ಕ್ರಿಪ್ಟೋಟೆರೆಸ್ಟ್ರಿಯಲ್” ಜೀವಿಗಳ ಕ್ಷೇತ್ರದ ಮೇಲೆ ಬೆಳಕು ಚೆಲ್ಲಿದೆ. ಇದರಲ್ಲಿ ಏಲಿಯನ್‌ಗಳನ್ನು ಅನ್ಯಗ್ರಹ ಜೀವಿಗಳೆಂದು ನಾವು ಭಾವಿಸಿದ್ದೇವೆ. ಆದರೆ ಅವು ದೂರದ ಗ್ರಹಗಳಿಂದ ಅಲ್ಲ. ಸಾಗರ ಮತ್ತು ಆಳವಾದ ಭೂಗತ ಪ್ರದೇಶಗಳಂತಹ ಅನ್ವೇಷಿಸಲಾಗದ ಪ್ರದೇಶಗಳಲ್ಲಿ ಅವುಗಳು ಯಾರ ಕಣ್ಣಿಗೂ ಕಾಣದಂತೆ ಮರೆಯಾಗಿ ವಾಸಿಸುತ್ತವೆ ಎಂದು ಹಾರ್ವರ್ಡ್ ವಿಜ್ಞಾನಿಗಳು ಹೇಳಿದ್ದಾರೆ

ಭೂಮಿಯಲ್ಲಿ ಇನ್ನೂ ವಿಶಾಲವಾದ, ಅನ್ವೇಷಿಸದ ಪ್ರದೇಶಗಳು ಇವೆ. ಭೂಮಿಯ ಶೇ. 80ರಷ್ಟು ಸಾಗರಗಳು ನಕ್ಷೆಯಲ್ಲಿ ಇಲ್ಲ. ಅಂತಹ ಪ್ರದೇಶಗಳಲ್ಲಿ ಇಂತಹ ಜೀವಿಗಳು ವಾಸಿಸಲು ಸಾಕಷ್ಟು ಜಾಗವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದು, ಇವರು ದೂರದ ಗ್ರಹದಿಂದ ಭೂಮಿಗೆ ಬರುವವರಲ್ಲ. ನಮ್ಮದೇ ಪ್ರಪಂಚದಲ್ಲಿರುವ ದೀರ್ಘಾವಧಿಯ ನಿವಾಸಿಗಳು ಎಂದಿದ್ದಾರೆ.

ಇಂತಹ ಜೀವಿಗಳು ಮಾನವರ ಮೇಲೆ ಅನಿರೀಕ್ಷಿತ ದಾಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಈ ಜೀವಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವುದಾಗಿ ಹೇಳಲಾಗುತ್ತದೆ