ಪೊಲೀಸ್‌ ಬಂಧನ, ಜಾಮೀನು ರದ್ಧಾಂತದ ಬಳಿಕ ಸಿ.ಟಿ ರವಿ ಅವರು ಚಿಕ್ಕಮಗಳೂರಿಗೆ ತೆರಳಿದ್ದಾರೆ. ರವಿ ಅವರನ್ನು ಪತ್ನಿ ಪಲ್ಲವಿ ಕಣ್ಣೀರು ಹಾಕುತ್ತಾ ಬರಮಾಡಿಕೊಂಡರು

Waves of Karnataka


ಬೆಳಗಾವಿಯಲ್ಲಿ ಬಂಧನ, ಜಾಮೀನು, ಬಿಡುಗಡೆ ರಾದ್ಧಾಂತದ ಬಳಿಕ ಮನೆ ಸೇರಿದ ಸಿ.ಟಿ ರವಿ ಅವರನ್ನು ಕುಟುಂಬಸ್ಥರು ಆರತಿ ಮಾಡಿ ಬರಮಾಡಿಕೊಂಡರು. ತಲೆಗೆ ಪೆಟ್ಟು ಮಾಡಿಕೊಂಡು ಬ್ಯಾಂಡೇಜ್‌ ಹಾಕಿಕೊಂಡು ಬಂದ ಪತಿಯನ್ನು ಕಂಡು ಪತ್ನಿ ಪಲ್ಲವಿ ಅವರು ತಬ್ಬಿಕೊಂಡು ಕಣ್ಣೀರು ಹಾಕಿದರು.

ವಿಧಾನಮಂಡಲ ಅಧಿವೇಶನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅವಾಚ್ಯ ಪದ ಬಳಕೆ ಆರೋಪದ ಗಲಾಟೆ, ಬಂಧನ ಬಿಡುಗಡೆ ರಾದ್ಧಾಂತದ ಬಳಿಕ ಶನಿವಾರ ರಾತ್ರಿ ಚಿಕ್ಕಮಗಳೂರಿಗೆ ಸಿಟಿ ರವಿ ತೆರಳಿದರು. ಅವರಿಗೆ ಕಾರ್ಯಕರ್ತರು ದಾರಿಯುದ್ಧಕ್ಕೂ ಮೆರವಣಿಗೆ, ಹೂಹಾಕಿ ಸ್ವಾಗತ ಕೋರಿದರು. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುವ ವೇಳೆ ಮಾರ್ಗಮಧ್ಯೆ ಶನಿವಾರ ರಾತ್ರಿ ಹಾಸನ ನಗರಕ್ಕೆ ಆಗಮಿಸಿದ ಸಿ.ಟಿ ರವಿ ಅವರಿಗೆ ಕಾರ್ಯಕರ್ತರು ಕೆಲ ದೂರ ದಾರಿಯುದ್ಧಕ್ಕೂ ಜೈಕಾರಿ ಹಾಕಿ ಅದ್ಧೂರಿ ಮೆರವಣಿಗೆ ಮಾಡಿದರು