ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಸರಸ್ವತಿಪುರಂನಲ್ಲಿ ಇರುವ ಕಾಮಾಕ್ಷಿ ಆಸ್ಪತ್ರೆಗೆ ಮಂಗಳವಾರ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.
ಆಸ್ಪತ್ರೆಯ ವೈದ್ಯರಾದ ಡಾ.ಅಜಯ್ ಹೆಗ್ಡೆ ಅವರು ಆರೋಗ್ಯ ತಪಾಸಣೆಯೊಂದಿಗೆ ಎಕ್ಸ್ ರೇ ತೆಗೆದು ಪರಿಶೀಲನೆ ನಡೆಸಿದ್ದು, ಅಗತ್ಯ ಚಿಕಿತ್ಸೆಗೆ ಮಾರ್ಗದರ್ಶನ ನೀಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ದರ್ಶನ್ ಸುಮಾರು 20 ನಿಮಿಷ ಇದ್ದರು. ಈ ವೇಳೆ ನಟ ಧನ್ವೀರ್ ಕೂಡ ಇದ್ದರು. ಆರೋಗ್ಯ ತಪಾಸಣೆ ಬಳಿಕ ಪುನಃ ತಿ.ನರಸೀಪುರದ ರಸ್ತೆಯಲ್ಲಿರುವ ಫಾರಂ ಹೌಸ್‌ಗೆ ತೆರಳಿ ವಾಸ್ತವ್ಯ ಹೂಡಿದರು.
