ಹವ್ಯಕ ಬ್ರಾಹ್ಮ ಣ ಸಮಾಜ ಮೂಲತಃ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಂದಿ. ನನ್ನ ಬಳಿ ಪ್ರಮುಖವಾಗಿ ಅಡಿಕೆ ಸಂಬಂಧಿತ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ. ಅಡಿಕೆ ಕೇವಲ ಎಲೆ ಅಡಿಕೆಯಾಗಿ ತಿನ್ನಲು ಮಾತ್ರ ಬಳಕೆಯಾಗದೆ ಮದುವೆಯಿಂದ ಹಿಡಿದು ಶ್ರಾದ್ಧದವರೆಗೆ ಉಪಯೋಗವಾಗಿದೆ. ಅನೇಕ ರೀತಿಯ ವ್ಯತಿರಿಕ್ತ ವರದಿಗಳು ಅಡಿಕೆ ಬಗ್ಗೆ ಬಂದರೂ ಸಹ ಭಾರತ ಸರ್ಕಾರದ ಮಂತ್ರಿಯಾಗಿ ಅಡಿಕೆ ಬೆಳೆಗಾರರ ಯಾವುದೇ ಸಮಸ್ಯೆಗಳಿಗೆ ನಾವು ಜೊತೆಯಾಗಿ ಇರುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಅಖಿಲ ಹವ್ಯಕ ಮಹಾಸಭಾ 81 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಒಟ್ಟು ಹಿಂದೂ ಸಮಾಜವನ್ನು ನಾವು ಜೊತೆಯಾಗಿ ತೆಗೆದುಕೊಂಡು ಹೋಗಬೇಕಿದೆ. ಇಂದು ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಫ್ರೆಜೈಲ್ 5 ಎನ್ನುತ್ತಿದ್ದ ಆರ್ಥಿಕತೆ ಒಡೆದು ಹೋಗಬಹುದಾಗಿದ್ದ ಆರ್ಥಿಕತೆ ಸ್ಥಿತಿಯಿಂದ ಇಂದು ಜಗತ್ತಿನಲ್ಲಿ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯ ದೇಶವಾಗಿ ಇವತ್ತು ಹೊರಹೊಮ್ಮಿದೆ.
