ದೇಶದ ಅತ್ಯಂತ ದುಬಾರಿ ಮನೆ ಅಂದ್ರೆ ಅದು ಮುಖೇಶ್ ಅಂಬಾನಿ ನಿವಾಸ ಅಂಟಿಲಿಯಾ ಅಂತಲೇ ನಮಗೆ ಮೊದಲು ತಲೆಗೆ ಬರೋದು. ಆದರೆ ಬೆರೆ ದೇಶದಲ್ಲೆಲ್ಲ ವಿಶ್ವದಲ್ಲೇ ಅತ್ಯಂತ ದುಬಾರಿ ಹಾಗೂ ದೊಡ್ಡ ಮನೆ ಅಂದ್ರೆ ಅದು ಗುಜರಾತ್ನ ವಡೋದರಾದಲ್ಲಿ ಇದೆ. ಲಕ್ಷ್ಮೀ ವಿಲಾಸ ಪ್ಯಾಲೆಸ್ ಅಂತಲೇ ಕರೆಸಿಕೊಳ್ಳುವ ಈ ಬಂಗಲೆ
ಈ ಪ್ಯಾಲೆಸ್, ಇಂಗ್ಲೆಂಡ್ನಲ್ಲಿರುವ ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ಗಿಂತ,ನಾಲ್ಕುಪಟ್ಟು ದೊಡ್ಡದಿದೆ ಎಂದು ಹೇಳಲಾಗುತ್ತದೆ. ಸದ್ಯ ಈ ಪ್ಯಾಲೆಸ್ ನಲ್ಲಿ , ಸಮರ್ಜೀತ್ ಗಾಯಕ್ವಾಡ್ ಅವರು, ತಮ್ಮ ಪತ್ನಿ ರಾಧಿಕಾರಾಜೆ ಗಾಯಕ್ವಾಡ್ ಅವರೊಂದಿಗೆ, ಇಲ್ಲಿ ವಾಸಿಸುತ್ತಿದ್ದಾರೆ.ಈ ಲಕ್ಷ್ಮೀ ವಿಲಾಸ ಪ್ಯಾಲೇಸ್ನಲ್ಲಿ ಒಟ್ಟು 170 ರೂಮ್ಗಲಿವೆ. ಒಂದು ಗಾಲ್ಫ್ ಕೋರ್ಸ್ ಇದೆ. ಈ ಬಂಗಲೆಯನ್ನು 1890ರಲ್ಲಿ ನಿರ್ಮಾಣ ಮಾಡಲಾಗಿದೆ.
ಇತಿಹಾಸದ ಪುಟಗಳು ಈ ಭವ್ಯ ಅರಮನೆಯ ಬಗ್ಗೆ ಹಲವು ಪುಟಗಳನ್ನು ತೆರೆದಿಡುತ್ತದೆ. ಮೂರನೇ ಸಯಾಜಿರಾವ್ ಗಾಯ್ಕವಾಡ್ ಮಹರಾಜರು ಬರೋಡದಾದಲ್ಲಿ ರಾಜ್ಯವಾಳುತ್ತಿರುವಾಗ ಈ ಒಂದು ಭವ್ಯ ಲಕ್ಷ್ಮೀ ವಿಲಾಸ ಪ್ಯಾಲೇಸ್ನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಲಕ್ಷ್ಮೀ ನಿವಾಸ ಪ್ಯಾಲೇಸ್ನ್ನ ವಿಶ್ವದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಬಂಗಲೆ ಎಂದು ಗುರುತಿಸಲಾಗುತ್ತದೆ.
ಹೌಸಿಂಗ್ ಡಾಟ್ಕಾಮ್ ಹೇಳುವ ಪ್ರಕಾರ ಈ ಭವ್ಯ ಬಂಗಲೆ 3 ಕೋಟಿ, 4 ಲಕ್ಷ 91 ಸಾವಿರ ಸ್ಕ್ವೇರ್ಫೀಟ್ ವಿಸ್ತಾರದಲ್ಲಿ ಹಬ್ಬಿಕೊಂಡಿದೆ ಎಂದು ಹೇಳಿದೆ. ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ಇರೋದು 8 ಲಕ್ಷ 28 ಸಾವಿರ,828 ಸ್ಕ್ವೇರ್ಫೀಟ್ನಲ್ಲಿ ವಿಸ್ತಾರದ ಜಾಗದಲ್ಲಿ ನಿರ್ಮಾಣಗೊಂಡಿದೆ. ಜಗತ್ತಿನ ದುಬಾರಿ ಬಂಗಲೆ ಎಂದು ಕರೆಸಿಕೊಳ್ಳುವ ಮುಖೇಶ್ ಅಂಬಾನಿಯವರ ಮನೆಯ ನಿರ್ಮಾಣವಾಗಿದ್ದು ಕೇವಲ 48,780 ಸ್ಕ್ವೇರ್ ಫೀಟ್ ಜಾಗದಲ್ಲಿ.ಈ ಲಕ್ಷ್ಮೀ ವಿಲಾಸ ಪ್ಯಾಲೆಸ್ನ್ನು ಇಡೀ ವಡೋದರಾದ ಭವ್ಯತೆಯ ಗುರುತು ಎಂದೇ ಎಲ್ಲರೂ ಹೇಳುತ್ತಾರೆ.
ಸ್ನೇಹಿತರೆ ನೀವೇನಾದರೂ ವಡೋದರಾಕ್ಕೆ ಹೋದರೆ ಈ ಲಕ್ಷ್ಮೀ ವಿಲಾಸ ಪ್ಯಾಲೆಸ್ನ್ನು ನೋಡಿಕೊಂಡು ಬನ್ನಿ
