ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಿಟಿ ರವಿ ಧರ್ಮಸ್ಥಳಕೆ ಬಂದು ಪ್ರಮಾಣ ಮಾಡುವ ಮೂಲಕ ತಾವು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಎಂದು ಸವಾಲೆಸೆದರು. ಸಿಟಿ ರವಿ ನಿತ್ಯವೂ ಮಾಧ್ಯಮಗಳ ಮುಂದೆ ನಾನು ಯಾವುದೇ ಅಶ್ಲೀಲ ಪದ ಬಳಸಿಲ್ಲ ಎಂದು ವಾದಿಸುತ್ತಿದ್ದಾರೆ. ಹಾಗಿದ್ದರೆ ಧರ್ಮಸ್ಥಳದಲ್ಲಿ ನನ್ನ ಉಪಸ್ಥಿತಿಯಲ್ಲಿ ಈ ಕುರಿತು ಪ್ರಮಾಣ ಮಾಡಲಿ ಎಂದು ಕಾಂಗ್ರೆಸ್ ನಾಯಕಿ ಸವಾಲು ಹಾಕಿದರು.
ಸಿಟಿ ರವಿ ನನ್ನ ವಿರುದ್ಧ ಬಳಸಿರುವ ಪದ ಸಭ್ಯ ನಾಗರಿಕರು ಬಳಸುವಂತದ್ದಲ್ಲ. ಅದನ್ನು ನಾನು ತಪ್ಪಿಯೂ ನನ್ನ ಬಾಯಿಂದ ಆಡಲಾರೆ. ಆದರೆ ಅವರ ಪದ ಬಳಕೆಯಿಂದ ನನಗೆ ಆಗಿರುವ ನೋವು ಮಾತ್ರ ಅಗಾಧ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭಾವುಕರಾಗಿ ನುಡಿದರು.
