ಡೊನಾಲ್ಡ್ ಟ್ರಂಪ್ ಮುಂದಿನ ತಿಂಗಳು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಲಸೆ ಕಾನೂನುಗಳಲ್ಲಿ ಬದಲಾವಣೆಗಳಾಗುವ ನಿರೀಕ್ಷೆಯಿದೆ.

Waves of Karnataka


 ಅಮೆರಿಕಾದಲ್ಲಿ ಮುಂದಿನ ತಿಂಗಳು ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ವಲಸೆ ಕುರಿತು ಕೆಲಸ ಮಾಡುವ ವಕೀಲರು ತಮ್ಮ ವಿದೇಶಿ ಕ್ಲೈಂಟ್ ಗಳಿಗೆ, ಅಮೆರಿಕದ ವೀಸಾದಲ್ಲಿದ್ದು ಟೆಕಿಗಳಾಗಿ ಕೆಲಸ ಮಾಡುತ್ತಿರುವವರಿಗೆ ಅಮೆರಿಕಕ್ಕೆ ಮರಳುವಂತೆ ತಿಳಿಸಿದ್ದಾರೆ‌

ಟ್ರಂಪ್ ಅಧಿಕಾರ ವಹಿಸಿದ ಮೇಲೆ ಕೆಲಸದ ವೀಸಾಗಳಲ್ಲಿ ಹಲವು ವಿಧಗಳ ನಿಬಂಧನೆಗಳು ಬರುವ ಸಾಧ್ಯತೆ ಇರುವುದರಿಂದ ಈ ಎಚ್ಚರಿಕೆಯನ್ನು ನೀಡಲಾಗ್ತಿದೆ. ಅದರಲ್ಲೂ ಟೆಕ್ ಇಂಡಸ್ಟ್ರೀಯಲ್ಲಿರುವವರಿಗೆ ಇದು ಹೆಚ್ಚು ಪರಿಣಾಮ ಬೀಳಲಿದೆ.

ಅದರಲ್ಲೂ ಮುಸ್ಲಿಂ ಸಮುದಾಯದ ಪ್ರಾಬಲ್ಯವಿರುವ ದೇಶಗಳಿಂದ ಜನ ಅಮೆರಿಕಕ್ಕೆ ಬರುವುದನ್ನು ತಡೆಯುವ ಸಾಧ್ಯತೆಯಿದೆ ಎಂದು ನ್ಯೂ ಯಾರ್ಕ್ ಪೋಸ್ಟ್ ವರದಿ ಮಾಡಿದೆ