ಬಳ್ಳಾರಿ ಜಿಲ್ಲೆಯ ಸಂಡೂರಿನ ಕಾಡುಗಳಲ್ಲಿ ಆರಂಭಿಕ ಮಾನವ ಆವಾಸಸ್ಥಾನಗಳನ್ನು ಪತ್ತೆಹಚ್ಚುವಲ್ಲಿ ತೊಡಗಿರುವ ತಜ್ಞರ ತಂಡವು ಇತ್ತೀಚೆಗೆ ಬ್ರಿಟಿಷರ ಕಾಲದ 200 ವರ್ಷಗಳಷ್ಟು ಹಳೆಯದಾದ ಒಂದು ಕಿ.ಮೀ ಸುರಂಗ ಮಾರ್ಗ ಪತ್ತೆ ಹಚ್ಚಿದೆ.
ಸಂಡೂರಿನ ಕಾಡುಗಳಲ್ಲಿ ಅನೇಕ ದೊಡ್ಡ ಮತ್ತು ಚಿಕ್ಕ ಗುಹೆಗಳಿದ್ದು, ತಜ್ಞರ ತಂಡವು ಕೆಲವು ಸಮಯದ ಹಿಂದೆ ತನ್ನ ಅಧ್ಯಯನವನ್ನು ಪ್ರಾರಂಭಿಸಿತು. ಪುರಾತತ್ವ ಪೂರ್ವ ಇತಿಹಾಸ ವಸ್ತುಸಂಗ್ರಹಾಲಯದ ಗೌರವ ನಿರ್ದೇಶಕ ಪ್ರೊ.ರವಿ ಕೋರಿಶೆಟ್ಟರ್ ಮತ್ತು ಬಳ್ಳಾರಿಯ ವನ್ಯಜೀವಿ ತಜ್ಞರಾದ ಸಮದ್ ಕೊಟ್ಟೂರು ಮತ್ತು ಸಂತೋಷ್ ಮಾರ್ಟಿನ್ ನೇತೃತ್ವದ ತಂಡವು ಸುರಂಗವನ್ನು ಕಂಡುಹಿಡಿದಿದೆ.
