ಪ್ರಧಾನಿಯಿಂದ ವಿಜಯಪುರದ ವ್ಯಕ್ತಿಯ ಉಲ್ಲೇಖ: ಸೈಬರ್ ಕ್ರೈಮ್ ವಿರುದ್ಧದ ಹೋರಾಟಕ್ಕೆ ಮೆಚ್ಚುಗೆಯ ಮಹಾಪೂರ

Waves of Karnataka


 ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ ವಿಜಯಪುರದ ವ್ಯಕ್ತಿ ಸಂತೋಷ್ ಪಾಟೀಲ್ ಈಗ ವ್ಯಾಪಕವಾಗಿ ಸುದ್ದಿಯಲ್ಲಿದ್ದಾರೆ.

ಸೈಬರ್ ಕ್ರೈಮ್, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಕರು ವ್ಯಾಪಕವಾದ ವಂಚನೆಯಲ್ಲಿ ತೊಡಗಿರುವುದರ ವಿಷಯವಾಗಿ ಮನ್ ಕೀ ಬಾತ್ ನಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ವಿಜಯಪುರದ ಸಂತೋಷ್ ಪಾಟೀಲ್ ಎಂಬ ವ್ಯಕ್ತಿಯ ಹೆಸರು ಉಲ್ಲೇಖಿಸಿ ಆತನ ಹೋರಾಟದ ಬಗ್ಗೆ ಹೇಳಿದ್ದರು. ಈಗ ಸಂತೋಷ್ ಪಾಟೀಲ್ ಗೆ ಮೆಚ್ಚುಗೆಯ ಮಹಾಪೂರ ವ್ಯಕ್ತವಾಗತೊಡಗಿದೆ.