ನಿಮ್ಮ ಆಶೀರ್ವಾದ ಇರೋವರ್ಗೂ ಯಾರೂ ನನ್ನ ಏನೂ ಮಾಡೋಕಾಗಲ್ಲ: ಸಿದ್ದರಾಮಯ್ಯ, ಹೌದು ಹುಲಿಯಾ ಎಂದ ಅಭಿಮಾನಿಗಳು

Waves of Karnataka


 ಮುಡಾ ಹಗರಣ ಕೇಸಿನಲ್ಲಿ ಮೈಸೂರು ಲೋಕಾಯುಕ್ತದಿಂದ ಎಫ್ ಐಆರ್ ದಾಖಲಾಗಿರುವ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ವಿರೋಧ ಪಕ್ಷಗಳಿಂದ ತೀವ್ರ ಒತ್ತಡ ಕೇಳಿಬರುತ್ತಿದೆ.

ಈ ಸಂದರ್ಭದಲ್ಲಿ ಇಂದು ಮೈಸೂರಿಗೆ ಕಾರ್ಯಕ್ರಮಕ್ಕೆ ತೆರಳಿದ್ದ ಸಿಎಂ ವೇದಿಕೆಯಲ್ಲಿ ಮಾತನಾಡುತ್ತಾ, ನಿಮ್ಮ ಜನರ ಆಶೀರ್ವಾದ ಇರೋವರೆಗೂ ಯಾರೂ ನನ್ನ ಏನೂ ಮಾಡೋಕಾಗಲ್ಲ ಎಂದಿದ್ದಾರೆ. ಮೈಸೂರಿನ ಅಶೋಕಪುರಂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಸ್ವಲ್ಪದಿನ ತೊಂದ್ರೆ ಕೊಡಬಹುದು ಅಷ್ಟೇ. ಕಾನೂನು ಮೂಲಕ ಏನು‌ ಮಾಡುವುದಕ್ಕೆ ಆಗಲ್ಲ ಎಂದು ಹೇಳಿದ್ದಾರೆ

ವಿಪಕ್ಷದವರು ರಾಜೀನಾಮೆ ಕೇಳುತ್ತಿದ್ದಾರೆಂದು ನನಗೆ ಎಷ್ಟೋ ಜನ ಹೇಳುತ್ತಿದ್ದಾರೆ. ನಾನು ಯಾರಿಗೂ ಹೆದರಲ್ಲ ಜಗ್ಗಲ್ಲ, ಬಗ್ಗಲ್ಲ. ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ನಾನು ಕ್ಲಿಯರ್ ಇದ್ದೇನೆ ಎಂದು. ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಆಗ ನೆರೆದಿದ್ದ ಅವರ ಅಭಿಮಾನಿಗಳು ಹೌದು ಹುಲಿಯಾ ಎಂದರು.

ಈ ಬಾರಿ ಶ್ರೀವತ್ಸ ಗೆದಿದ್ದಾನೆ ಸೋಮಶೇಖರ್ ಸೋತಿದ್ದಾನೆ. ನಾನು, ಮಹದೇವಪ್ಪ, ಶ್ರೀನಿವಾಸ ಪ್ರಸಾದ್ ಎಲ್ಲರೂ ಅಂಬೇಡ್ಕರ್ ವಾದಿಗಳು. ಅಂಬೇಡ್ಕರ್ ಸಂವಿಧಾನವನ್ನು ದಲಿತರಿಗೆ ಮಾತ್ರ ಮಾಡಲಿಲ್ಲ. ಅವಕಾಶ ವಂಚಿತರೆಲ್ಲರಿಗೂ ಮಾಡಿದ್ದಾರೆ