ಪವಿತ್ರಾಗೌಡಗೆ ಅಶ್ಲೀಲ ಫೋಟೊ ಕಳಿಸಿದ್ದು ದೃಢ; ಆದ್ರೆ ರೇಣುಕಾಸ್ವಾಮಿ ಕೊಲೆಯಲ್ಲಿ ಈ ಮೂವರು ಭಾಗಿಯೇ ಆಗಿಲ್ಲ! ಯಾರವರು?

Waves of Karnataka


 ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder case) ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದೆ. ಈಗಾಗಲೇ ದರ್ಶನ್‌ ಮತ್ತು ಗ್ಯಾಂಗ್‌ (Actor Darshan) ಜೈಲಿನಲ್ಲಿ ಬಂಧಿಯಾಗಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ರೇಣುಕಾಸ್ವಾಮಿ ಕೊಲೆಯಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳು ಭಾಗಿಯಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಚಾರ್ಜ್ಶೀಟ್ನಲ್ಲಿ ಕೊಲೆಯಲ್ಲಿ ಮೂವರು ಆರೋಪಿಗಳ ಪಾತ್ರವಿಲ್ಲ ಎಂದು ಉಲ್ಲೇಖಿಸಲಾಗಿದೆ.


ನಿಖಿಲ್ ನಾಯ್ಕ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಈ ಮೂವರು ಆರಂಭದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಾವೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಸೆರೆಂಡರ್ ಆಗಿದ್ದರು. ಆದರೆ ಈಗ ಈ ಕೊಲೆಯಲ್ಲಿ ಮೂವರ ಪಾತ್ರ ಇಲ್ಲ ಎಂಬುದು ಸಾಬೀತಾಗಿದೆ. ನಿಖಿಲ್ ನಾಯ್ಕ್, ಕೇಶವಮೂರ್ತಿ, ಕಾರ್ತಿಕ್‌ ಮೇಲೆ ಕೊಲೆ ಕೇಸ್‌ ಇಲ್ಲದಿದ್ದರೂ, ಚಾರ್ಜ್ಶೀಟ್ನಲ್ಲಿ 201 ಅಡಿ ಸಾಕ್ಷಿ ನಾಶ ಆರೋಪವಿದೆ. ಮೂವರ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಆರೋಪವನ್ನು ಪೊಲೀಸರು ಪ್ರಸ್ತಾಪ ಮಾಡಿದ್ದಾರೆ. ಸಾಕ್ಷಿ ನಾಶ ಹಾಗೂ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ

.ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರೇಣುಕಾ ಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಫೋಟೊಗಳನ್ನು ಕಳಿಸಿರುವುದು ದೃಢವಾಗಿದೆ. ಪವಿತ್ರಾಗೌಡ ಇನ್ಸ್ಟಾಗ್ರಾಮ್‌ ಅಕೌಂಟ್‌ಗೆ ರೇಣುಕಾ ಸ್ವಾಮಿ ಬಳಸುತ್ತಿದ್ದ ಅಕೌಂಟ್‌ನಿಂದ ಫೋಟೊ ಕಳಿಸಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

ರೇಣುಕಾಸ್ವಾಮಿ ಫೋಟೊ ಕಳಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇನ್ಸ್ಟಾಗ್ರಾಂಗೆ ಪತ್ರ ಬರೆದಿದ್ದರು. ಇದೀಗ ಪೊಲೀಸರ ಮನವಿಗೆ ಸ್ಪಂದಿಸಿ ಮಾಹಿತಿ ಕೊಟ್ಟಿದ್ದಾರೆ. ಪವಿತ್ರಾಗೌಡಗೆ ಕಳುಹಿಸಿದ್ದ ಮೇಸೆಜ್‌ಗಳು ಹಾಗೂ ಅಶ್ಲೀಲ ಫೋಟೊ ಬಗ್ಗೆ ಇನ್ಸ್ಟಾಗ್ರಾಂ ಖಚಿತಪಡಿಸಿದೆ. ತನಿಖಾ ತಂಡ ಈ ಮಾಹಿತಿಯನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ.