ರೇವ್‌ ಪಾರ್ಟಿಯಲ್ಲಿ ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

Waves of Karnataka


 ಮೇ 19ರ ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದಿದ್ದ ರೇವ್‌ ಪಾರ್ಟಿಯಲ್ಲಿ (Rave party) ತೆಲುಗು ನಟಿಯರಾದ ಹೇಮಾ (Telugu actress Hema) ಹಾಗೂ ಆಶಿ ರಾಯ್ (Aashi Roy) ಒಳಗೊಂಡಂತೆ 103 ಮಂದಿ ಭಾಗಿಯಾಗಿದ್ದರು. ಇಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಅಷ್ಟೂ ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಈಗ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ 86 ಮಂದಿಯ ರಿಪೋರ್ಟ್ ಪಾಸಿಟಿವ್ ಬಂದಿದೆ. ನಟಿಯರಾದ ಹೇಮಾ ಹಾಗೂ ಆಶಿ ರಾಯ್‌ ಸಹ ಮಾದಕ ವಸ್ತುಗಳನ್ನು ಸೇವಿಸಿದ್ದಾರೆಂಬುದು ಸಾಬೀತಾಗಿವೆ ಎನ್ನಲಾಗಿದೆ.

ಈಗಾಗಲೇ ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ. 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದರೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಾಗಿ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿದ್ದಾರೆ.

Tags