ಮುಖ್ಯ ಚುನಾವಣಾಧಿಕಾರಿಗೆ ವಿದೇಶಗಳಿಂದ ಬೆದರಿಕೆ; ಅವರಿಗೆ ಈಗ ಝಡ್​ ಪ್ಲಸ್​ ಭದ್ರತೆ

Waves of Karnataka


 ಸಂಭಾವ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajeev Kumar) ಅವರಿಗೆ ಸಶಸ್ತ್ರ ಕಮಾಂಡೋಗಳ ಝಡ್-ವರ್ಗದ (Z- plus) ವಿಐಪಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ. ಅಂತಾರಾಷ್ಟ್ರೀಯ ಬೆದರಿಕೆಗಳಿಂದಾಗಿ ಕುಮಾರ್ ಅವರ ಭದ್ರತೆ ಹೆಚ್ಚಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.

“ಕೇಂದ್ರ ಗೃಹ ಸಚಿವಾಲಯವು ಈ ಕಾರ್ಯಕ್ಕಾಗಿ ಸುಮಾರು 40-45 ಸಿಬ್ಬಂದಿಯ ತುಕಡಿಯನ್ನು ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್​ಗೆ) ಗೆ ವಹಿಸಿದೆ” ಎಂದು ಅವರು ಹೇಳಿದರು. ಸಿಆರ್​​ಪಿಎಫ್​ ಕಮಾಂಡೋಗಳು ಶೀಘ್ರದಲ್ಲೇ ಅವರ ಭದ್ರತೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮೂರು ಡಜನ್ ಗೂ ಹೆಚ್ಚು ಸಶಸ್ತ್ರ ಸಿಆರ್ ಪಿಎಫ್ ಕಮಾಂಡೋಗಳು ಕುಮಾರ್ ಅವರಿಗೆ ಕಾವಲು ಕಾಯಲಿದ್ದಾರೆ.