ಬಡವ ರಾಸ್ಕಲ್ ಧನಂಜಯ್ ಅಣ್ಣ From Mexico'ಗಾಗಿ ಚಿತ್ರದ ಮುಹೂರ್ತ ಮುಗಿಸಿದ್ದು, ಚಿತ್ರೀಕರಣಕ್ಕಾಗಿ ಸಿದ್ಧತೆ ಶುರು ಮಾಡಿದೆ.

Waves of Karnataka


 ಅಣ್ಣ From Mexico'ಗಾಗಿ 'ಬಡವ ರಾಸ್ಕಲ್' ಚಿತ್ರತಂಡ ಮತ್ತೆ ಒಂದಾಗಿದೆ. ಚಿತ್ರತಂಡ ಸದ್ದಿಲ್ಲದೇ ಶುಕ್ರವಾರ ಚಿತ್ರದ ಮುಹೂರ್ತ ಮುಗಿಸಿದ್ದು, ಚಿತ್ರೀಕರಣಕ್ಕಾಗಿ ಸಿದ್ಧತೆ ಶುರು ಮಾಡಿದೆ.

ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ 'ಅಣ್ಣ From Mexico' ಸಿನಿಮಾದ ಮುಹೂರ್ತ ನೆರವೇರಿದೆ. ರಾಯಲ್ ಸ್ಟುಡಿಯೋಸ್​ನ ಪಾಲುದಾರರಾದ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು ತಾಯಿ ಕ್ಯಾಮರಾಗೆ ಚಾಲನೆ ನೀಡಿದರು