ಪಂಚ ರಾಜ್ಯ ವಿಧಾನಸಭಾ ಚುನಾವಣೆ, ದೇಶದ ರಾಜಕಾರಣದ ಮೇಲೆ ಹಲವು ರೀತಿಯ ಪರಿಣಾಮಗಳನ್ನ ಬೀರ್ತಿದೆ.

Waves of Karnataka


 ಕರ್ನಾಟಕ ರಾಜಕಾರಣದ ಮೇಲೂ ಪಂಚ ರಾಜ್ಯ ಚುನಾವಣೆ ಹಲವು ರೀತಿಯ ಪರಿಣಾಮಗಳನ್ನ ಬೀರಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪಂಚ ರಾಜ್ಯ ಚುನಾವಣೆಯ ಫಲಿತಾಂಶವನ್ನ ತಮಗೆ ಬೇಕಾದ ರೀತಿಯಲ್ಲಿ ವಿಶ್ಲೇಷಣೆ ಮಾಡಿಕೊಳ್ಳಲು ಮತದಾರನ ತೀರ್ಪು ನೆರವಾಗಲಿದೆ. ಜೊತೆಯಲ್ಲೇ ಜೆಡಿಎಸ್‌ಗೂ ಕೂಡ ತಾನು ಎನ್‌ಡಿಎ ಸೇರಿದ ತೀರ್ಮಾನವನ್ನ ಸಮರ್ಥನೆ ಮಾಡಿಕೊಳ್ಳಲು ಈ ಫಲಿತಾಂಶ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಪಂಚ ರಾಜ್ಯ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಏನೆಲ್ಲಾ ಪರಿಣಾಮಗಳನ್ನ ಬೀರಬಹುದು ಅನ್ನೋದ್ರ ಸಮಗ್ರ ಅವಲೋಕನ ಇಲ್ಲಿದೆ.