ಯುಪಿ ಮಾದರಿಯಲ್ಲೇ ರಾಜಸ್ಥಾನಕ್ಕೆ ‘ಬಾಬಾ’ ಸಿಎಂ? ಮಧ್ಯ ಪ್ರದೇಶಕ್ಕೆ ‘ಮಾಮಾ’ ಮುಖ್ಯಮಂತ್ರಿ?
December 03, 2023
ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ, ಯಾವುದೇ ರಾಜ್ಯದಲ್ಲೂ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ರಾಜಸ್ಥಾನದಲ್ಲಿ ವಸುಂಧರಾ ರಾಜೆ ಅವರೇ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರೂ ಬಾಬಾ ಬಾಲಕ್ ನಾಥ್ ಅವರ ಪರವಾದ ಅಲೆಯೂ ಇದೆ. ಇನ್ನು ಮಧ್ಯ ಪ್ರದೇಶದಲ್ಲಿ ಮಾಮಾಜಿ ಎಂದೇ ಜನಪ್ರಿಯರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಮತ್ತೊಂದು ಅವಧಿಗೆ ಸಿಎಂ ಆಗುವ ಸಾಧ್ಯತೆ ದಟ್ಟವಾಗಿದೆ.
