ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವುದು ಕೇವಲ ಮೂರೇ ಚಿತ್ರ ಆದರೂ ಅವರು ದೇಶಾದ್ಯಂತ ಮನೆಮಾತನಾಗಿರುವುದನ್ನು ನೋಡಿದ್ರೆ ನಿಜಕ್ಕೂ ಆಶ್ಚರ್ಯಕರವಾಗಿದೆ.
December 21, 2023
ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವುದು ಕೇವಲ ಮೂರೇ ಚಿತ್ರ ಆದರೂ ಅವರು ದೇಶಾದ್ಯಂತ ಮನೆಮಾತನಾಗಿರುವುದನ್ನು ನೋಡಿದ್ರೆ ನಿಜಕ್ಕೂ ಆಶ್ಚರ್ಯಕರವಾಗಿದೆ. ಉಗ್ರಂ, ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಈ ಮೂರು ಚಿತ್ರಗಳ ಖ್ಯಾತಿ ಏನೆಂಬುದು ಅರ್ಥವಾಗುತ್ತದೆ. ಪ್ರತಿ ಸಿನಿಮಾದಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವ ಪ್ರಶಾಂತ್, ಈಗ ಅವರ ಅತಿದೊಡ್ಡ ಪ್ರಾಜೆಕ್ಟ್ 'ಸಲಾರ್' ಗ್ರ್ಯಾಂಡ್ ರಿಲೀಸ್‌ಗೆ ಮುಂದಾಗಿದ್ದಾರೆ.
ಡಿಸೆಂಬರ್ 22 ರಂದು ಚಿತ್ರ ಬಿಡುಗಡೆ ಅಂಗವಾಗಿ ಅವರ ಪ್ರತಿಯೊಂದು ಟೈಟಲ್ ಅಪ್ ಡೇಟ್ ನಿಂದ ಕೊನೆಯವರೆಗೂ ಕುತೂಹಲದಿಂದ ಕಾಯುವ ಅಭಿಮಾನಿಗಳಿಗಾಗಿ ಪ್ರಶಾಂತ್ ನೀಲ್ ಅವರ ನಿರೀಕ್ಷೆಗಳು, ಆತಂಕ ಮತ್ತು ಸಹಜವಾಗಿಯೇ ಅವರ ತಂಡದ ಬಗ್ಗೆ ಇರುವ ಭರವಸೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ಅದು ಉಗ್ರಂ ಆಗಿರಲಿ ಅಥವಾ ಕೆಜಿಎಫ್, ಸಲಾರ್ ಯಾವುದೇ ಆಗಿರಲಿ ಪ್ರತಿಯೊಂದು ಚಿತ್ರಗಳು ನಿರ್ಮಾಣಕ್ಕಿಂತಲೂ ಹೆಚ್ಚಾಗಿ ಕಥೆಗಳಿಗೆ ಸಮಾನವಾದ ಪ್ರೀತಿಯಿಂದ ಮಾಡಲಾಗಿರುತ್ತದೆ. ಪ್ರೇಕ್ಷಕರು ಅದನ್ನು ಆನಂದಿಸುತ್ತಾರೆ ಎಂದು ಭಾವಿಸುತ್ತೇನೆ ಮತ್ತು ಅವರಿಗೆ ಮನರಂಜನೆ ನೀಡುವುದನ್ನು ಮುಂದುವರೆಸುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.
Tags
