ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ವರ್ಷದಿಂದ ಬದಲಾಗದೆ ಇರುವುದಕ್ಕೆ ವಾಹನ ಸವಾರರು ಬೇಸರವಾಗಿರುವ ನಡುವೆ ಸಿಹಿಸುದ್ದಿಯೊಂದು ಹೊರಬಿದ್ದಿದೆ.
December 11, 2023
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ವರ್ಷದಿಂದ ಬದಲಾಗದೆ ಇರುವುದಕ್ಕೆ ವಾಹನ ಸವಾರರು ಬೇಸರವಾಗಿರುವ ನಡುವೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗುವ ನಿರೀಕ್ಷೆಯಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರೀ ಇಳಿಕೆ ಕಂಡಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಸುವ ಬಗ್ಗೆ ದೊಡ್ಡ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
2022ರಲ್ಲಿ ಕಚ್ಚಾತೈಲದ ಬೆಲೆ ಭಾರೀ ಏರಿಕೆಯಾಗಿದ್ದಾಗ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 17 ರೂ. ಹಾಗೂ ಡೀಸೆಲ್‌ಗೆ 35 ರೂ. ವರೆಗೂ ಭಾರೀ ನಷ್ಟ ಅನುಭವಿಸುತ್ತಿತ್ತು. ಆದರೆ ಬಳಿಕ ದರದಲ್ಲಿ ಭಾರೀ ಇಳಿಕೆಯಾಗಿದ್ದು, ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 7-10 ರೂ. ಹಾಗೂ ಡೀಸೆಲ್‌ಗೆ 3-4 ರೂ. ಲಾಭ ಮಾಡಿಕೊಳ್ಳುತ್ತಿದೆ. ಕಳೆದ 3 ತಿಂಗಳಲ್ಲಿ ಸುಮಾರು 28,000 ಕೋಟಿ ರೂ ರಷ್ಟು ಲಾಭ ಮಾಡಿಕೊಂಡಿದೆ. ಸಚಿವಾಲಯವು ಈಗಾಗಲೇ OMC ಗಳೊಂದಿಗೆ ಕಚ್ಚಾ ಮತ್ತು ಚಿಲ್ಲರೆ ಬೆಲೆಯ ಸನ್ನಿವೇಶಗಳನ್ನು ಚರ್ಚಿಸಿದೆ
