ಕನ್ನಡ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್ ಸ್ಥಾನಮಾನವನ್ನು ಇನ್ನೂ ಉಳಿಸಿಕೊಂಡಿರುವ ನಟಿ ಮಾಲಾಶ್ರೀ ಅವರು ತಮ್ಮ ಮಗಳು ಆರಾಧನಾ ಅವರ ಚೊಚ್ಚಲ ಸಿನಿಮಾ ಕಾಟೇರ ಡಿಸೆಂಬರ್ 29 ರಂದು ತೆರೆಗೆ ಬರುತ್ತಿರುವುದರಿಂದ ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ.

Waves of Karnataka

'ನಂಜುಂಡಿ ಕಲ್ಯಾಣ ಸಿನಿಮಾ ಮಾಡುವಾಗ ನನ್ನ ಅಭಿನಯದ ಪ್ರಭಾವ ಏನೆಂಬುದು ನನಗೆ ತಿಳಿದಿರಲಿಲ್ಲ. ನನ್ನ ಹೃದಯದಲ್ಲಿ ನಾನು ಹೊಸದೇನನ್ನೋ ಅನುಭವಿಸರಿಲಿಲ್ಲ. ನಾನು ಚಿತ್ರೀಕರಣ ಮುಗಿಸಿದೆ ಮತ್ತು ಮರಳಿದೆ. ಇದ್ದಕ್ಕಿದ್ದಂತೆ, ಚಿತ್ರವು ಬ್ಲಾಕ್‌ಬಸ್ಟರ್ ಹಿಟ್ ಎಂದು ನನಗೆ ಹೇಳಲಾಯಿತು. ಆದರೆ, ಆ ಯಶಸ್ಸನ್ನು ಹೇಗೆ ಆನಂದಿಸಬೇಕೆಂದು ನನಗೆ ತಿಳಿದಿರಲಿಲ್ಲ. ಆದರೆ ಇಂದು, ನನ್ನ ಮಗಳ ಮೊದಲ ಸಿನಿಮಾ ತೆರೆಕಾಣುತ್ತಿದ್ದು, ಭಯವಿದೆ ಮತ್ತು ನಾನು ಎಲ್ಲಾ ದೇವರುಗಳನ್ನು ಪ್ರಾರ್ಥಿಸುತ್ತಿದ್ದೇನೆ. ಆ ಯಶಸ್ಸನ್ನು ನನ್ನ ಮಗಳ ಮೂಲಕ ನಾನು ಕಾಣಬೇಕು. ನಾನಿನ್ನೂ ಸಿನಿಮಾವನ್ನು ನೋಡಿಲ್ಲ ಮತ್ತು ಓರ್ವ ಪ್ರೇಕ್ಷಕರಾಗಿ ಸಿನಿಮಾವನ್ನು ಅನುಭವಿಸಲು ಬಯಸುತ್ತೇನೆ. ಪ್ರೀ-ರಿಲೀಸ್ ಈವೆಂಟ್‌ನಲ್ಲಿ ನಾನು ಅವಳ ನಟನೆಯನ್ನು ನೋಡಿದೆ ಮತ್ತು ನನಗೆ ತುಂಬಾ ಸಂತೋಷವಾಯಿತು. ಅವಳು ತಯಾರಾಗುತ್ತಿದ್ದಾಳೆಂದು ನನಗೆ ಗೊತ್ತಿತ್ತು' ಎಂದು ಹೇಳಿದರು.

'ನಮ್ಮ ಎಲ್ಲಾ ಕನಸುಗಳು ನನಸಾಗಬೇಕೆಂದು ನಾನು ಬಯಸುತ್ತೇನೆ' ಎನ್ನುವ ಮಾಲಾಶ್ರೀ ಅವರು ಬಹು ಭಾಷೆಗಳಲ್ಲಿ 140 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ನಟಿಯಾಗಿ ಗುರುತಿಸಿಕೊಳ್ಳಲು ಸಮಯ ತೆಗೆದುಕೊಂಡಿತು ಎಂದರು.