ರಾಕಿಂಗ್ ಸ್ಟಾರ್ ಯಶ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಗೆ ಯಶ್ 19 ರ ಶೀರ್ಷಿಕೆಯನ್ನು 'ಟಾಕ್ಸಿಕ್ - ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಎಂದು ಅನಾವರಣಗೊಳಿಸಲಾಗಿದೆ.

Waves of Karnataka


 ಅಂತೂ ನಟ ಯಶ್ ಅವರ 19 ನೇ ಚಿತ್ರ ಘೋಷಣೆಯಾಗಿದೆ. ಟಾಕ್ಸಿಕ್ (TOXIC) ಎಂದು ಹೆಸರಿಡಲಾಗಿರುವ ಈ ಚಿತ್ರವನ್ನು ಮಲಯಾಳಂನ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. ಇದೊಂದು ಜಾಗತಿಕ ಸಿನಿಮಾವಾಗಲಿದೆ ಎಂದು ಹೇಳಲಾಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಗೆ ಯಶ್ 19 ರ ಶೀರ್ಷಿಕೆಯನ್ನು 'ಟಾಕ್ಸಿಕ್ - ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಎಂದು ಅನಾವರಣಗೊಳಿಸಲಾಗಿದೆ. ಯಶ್ ಹುಟ್ಟುಹಬ್ಬದಂದು ಶೀರ್ಷಿಕೆ ಟೀಸರ್ ಅನಾವರಣಗೊಳಿಸಲಾಗಿದೆ.

ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತಿದೆ ಎಂಬ ರೂಮಿ ವಾಕ್ಯದ ಉಲ್ಲೇಖ ಮಾಡಲಾಗಿದೆ.  ಹಂಟಿಂಗ್ ಬಿಜಿಎಂ, ರ್ಯಾಪ್ ವಾಯ್ಸ್, ಗ್ರಾಫಿಕ್ಸ್ ವಿಷ್ಯುವಲ್ಸ್ ಜೊತೆಗೆ 1 ನಿಮಿಷ 18 ಸೆಕೆಂಡ್‌ಗಳ ಟೀಸರ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ. ಬರೀ ಟೈಟಲ್ ಅನೌನ್ಸ್‌ಮೆಂಟ್ ಟೀಸರ್‌ ಈ ರೀತಿ ಇದ್ದರೆ 'ಟಾಕ್ಸಿಕ್' ಸಿನಿಮಾ ಕ್ವಾಲಿಟಿ ಯಾವ ರೀತಿ ಇರುತ್ತೆ ಎಂದು ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗುತ್ತಿದೆ. ಈ ಸಣ್ಣ ಝಲಕ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ